Priyanka Upendra' to play Police Constable in her next movie | Oneindia Kannada

2017-06-09 2

ಪ್ರಿಯಾಂಕಾ ಉಪೇಂದ್ರ ಈಗ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಈ ರೀತಿಯ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆ ಮೂಲಕ 'ಮಮ್ಮಿ ಸೇವ್ ಮಿ' ಸಿನಿಮಾದ ನಂತರ ಪ್ರಿಯಾಂಕಾ ಉಪೇಂದ್ರ ಯಾವ ಸಿನಿಮಾ ಮಾಡುತ್ತಾರೆ ಎಂಬ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ. ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.! 'ಪ್ರಿಯಾಂಕ' ಮತ್ತು 'ಮಮ್ಮಿ ಸೇವ್ ಮಿ' ಚಿತ್ರಗಳು ಪ್ರಿಯಾಂಕಾ ಉಪೇಂದ್ರ ಅಭಿಮಾನಿಗಳಿಗೆ ತುಂಬ ಇಷ್ಟ ಆಗಿತ್ತು. ಹೊಸ ಹೊಸ ಪಾತ್ರಗಳ ಹುಡುಕಾಟದಲ್ಲಿರುವ ಪ್ರಿಯಾಂಕಾ ಈಗ ಪೊಲೀಸ್ ಕಾನ್ಸ್‌ಟೇಬಲ್ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ.

Videos similaires